Leelavathi: ಮುಸುರೆ ತಿಕ್ಕಿ ಜೀವನ ಮಾಡಿದ ಲೀಲಾವತಿ ಅಮ್ಮನವರ ಕಣ್ಣೀರಿನ ಕಥೆ! ಕೇವಲ 2ನೆ ಕ್ಲಾಸ್ ಓದಿದ್ದ ಇವರು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ..

Leelavathi life story ಸ್ನೇಹಿತರೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದಂತಹ ಲೀಲಾವತಿ ಅಮ್ಮನವರು ಹುಟ್ಟಿದಾಗಿನಿಂದಲೂ ಕಡು ಬಡತನ, ಊಟಕ್ಕೆ ಪರದಾಡುತ್ತಿದಂತಹ ಪರಿಸ್ಥಿತಿ ಇತ್ತು. ಹೀಗಾಗಿ ಎರಡನೇ ತರಗತಿ ಓದುತ್ತಿರುವಾಗಲೇ ಅವರ ತಂದೆ ತಾಯಿ ಶಾಲೆಯನ್ನು ಬಿಡಿಸಿ ಬೇರೆಯವರ ಮನೆಗೆ ಮುಸುರೆ ತಿಕ್ಕುವಂತಹ ಕೆಲಸಕ್ಕೆ ಕಳಿಸುತ್ತಾರೆ. ಹೀಗೆ ಅತಿ ಚಿಕ್ಕ ವಯಸ್ಸಿನಲ್ಲಿ ಹಣ ಸಂಪಾದನೆ ಮಾಡುತ್ತಾ ತಮ್ಮ ಮನೆಯವರನ್ನು ಸಾಕುವಂತಹ ಜವಾಬ್ದಾರಿಯನ್ನು ಹೊತ್ತುಕೊಂಡ ಲೀಲಾವತಿ(Leelavathi) ಅಮ್ಮನವರು ಕಷ್ಟ ಸುಖಗಳನ್ನು ಅರಿತು ಬೆಳೆದರು.

ಆದರೆ ಬಡತನ ಎನ್ನುವುದು ಅವರ ಉತ್ಸಾಹಕ್ಕೆ ತಡೆಯನ್ನು ಉಂಟು ಮಾಡಲಿಲ್ಲ. ಹೌದು ಗೆಳೆಯರೆ ಕೇವಲ 12ನೇ ವಯಸ್ಸಿನಲ್ಲಿ ನಟನ ಲೋಕವನ್ನು ಪ್ರವೇಶ ಮಾಡಿದಂತಹ ಲೀಲಾವತಿ(Leelavathi) ಅಮ್ಮನವರು ನಾಗಕನ್ನಿಕೆ ಎಂಬ ಸಿನಿಮಾದ ಮೂಲಕ ಬಾಲನಟಿಯಾಗಿ ಜನರಿಗೆ ಪರಿಚಯಗೊಂಡರು. ಆನಂತರ ಡಾಕ್ಟರ್ ರಾಜಕುಮಾರ್ ಅವರ ಭಕ್ತ ಪ್ರಹ್ಲಾದ ಸಿನಿಮಾದ ಮೂಲಕ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಂತಹ ಲೀಲಾವತಿಯವರು ಮತ್ತೆಂದು ಹಿಂದಿರುಗಿ ನೋಡಲೇ ಇಲ್ಲ.

600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುತ್ತ ಉತ್ತುಂಗದ ಶಿಖರದಲ್ಲಿದ್ದಂತಹ ಲೀಲಾವತಿ ಅಮ್ಮ ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗದೆ, ಹಿಂದಿ ತಮಿಳು ಹಾಗೂ ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸಿನಿಪ್ರೇಕ್ಷಕರ ಮನಸ್ಸನ್ನು ಗೆದ್ದರು. ಅಭಿನಯವನ್ನೇ ಉಸಿರಾಗಿಸಿಕೊಂಡಿದ್ದಂತಹ ಲೀಲಾವತಿ ಅಮ್ಮನವರು ತಮಗೆ ವಹಿಸಿದಂತಹ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಪಾತ್ರವೇ ತಾವಾಗುತ್ತ ಪರಕಾಯ ಪ್ರವೇಶ ಮಾಡುತ್ತಿದ್ದಂತಹ ನಟಿ.

ಸಣ್ಣ ವಯಸ್ಸಿಗೆ ಹಣ್ಣು ಹಣ್ಣು ಮುದುಕಿಯ ಪಾತ್ರಗಳಲ್ಲಿಯೂ ಅಚ್ಚುಕಟ್ಟಾಗಿ ಕಾಣಿಸಿಕೊಂಡು ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ಇನ್ನು ವರದಿ ಒಂದರ ಪ್ರಕಾರ ಲೀಲಾವತಿ ಅಮ್ಮನವರು ಆಗಿನ ಸ್ಟಾರ್ ನಟರಿಗಿಂತ ಹೆಚ್ಚಿನ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದರಂತೆ. ಹೀಗೆ ಆರು ರಾಜ್ಯ ಪ್ರಶಸ್ತಿಯನ್ನು ತಮ್ಮ ಮುಡುಗೇರಿಸಿಕೊಂಡಂತಹ ಲೀಲಾವತಿ ಅಮ್ಮನವರು ಸಿನಿ ಬದುಕಿನಲ್ಲಿ ಯಶಸ್ಸನ್ನು ಕಂಡ ಹಾಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ.

ಹೌದು ಗೆಳೆಯರೇ ತಮ್ಮ ಪತಿ ಯಾರೆಂಬುದನ್ನು ಅಧಿಕೃತವಾಗಿ ಎಲ್ಲೂ ಹೇಳಿಕೊಳ್ಳದಂತ ಲೀಲಾವತಿಯವರು ತಮ್ಮ ವೈಯಕ್ತಿಕ ವಿಚಾರಗಳಿಂದ ಸಾಕಷ್ಟು ಅವಮಾನಕ್ಕೆ ಒಳಗಾದರೂ, ತಮ್ಮ ನಾಟಕ ರಂಗದ ಗುರುಗಳಾದ ಮಹಾಲಿಂಗ ಭಾಗವತರ್ ಅವರನ್ನು ಲೀಲಾವತಿ ಅಮ್ಮನವರು ಮದುವೆಯಾಗಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದವು ಹಾಗೂ ಇದಕ್ಕೆ ಸಾಕ್ಷಿಯಾಗಿ ಸಾಕಷ್ಟು ಫೋಟೋಗಳು ಕೂಡ ಇತ್ತೀಚಿನ ಕೆಲ ದಿನಗಳ ಹಿಂದೆ ಚರ್ಚೆಯಾಗಿತ್ತು.

ಈ ಕುರಿತು ಸಂದರ್ಶನ ಒಂದರಲ್ಲಿ ಲೀಲಾವತಿ(Leelavathi) ಅಮ್ಮನವರನ್ನು ಪ್ರಶ್ನೆ ಮಾಡಿದಾಗ “ನನ್ನ ಪತಿಯವರು ನಾನು ಮತ್ತು ನನ್ನ ಮಗನನ್ನು ನನ್ನವರು ಎಂದು ಹೇಳಿದರೆ ಅವರನ್ನು ಕಟ್ಟಿಕೊಂಡಿರುವವರು ಸತ್-ತು ಹೋಗುತ್ತಿದ್ದರು ಅದಕ್ಕೆ ನಾನು ಏನು ಹೇಳೋಕೆ ಹೋಗಲಿಲ್ಲ” ಎಂದು ಲೀಲಾವತಿ ಅಮ್ಮನವರ ಖುದ್ದಾಗಿ ತಮ್ಮ ಮದುವೆ ಹಾಗೂ ಗಂಡನ ಬಗ್ಗೆ ಮಾರ್ಮಿಕ ಉತ್ತರ ನೀಡಿದರು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!